RBI: ಮತ್ತೆ ಚಲಾವಣೆಗೆ ಬರಲಿದೆಯೇ 1000 ನೋಟು? ಚಿಪ್ ಇರುತ್ತಾ?

0
52
RBI

RBI

2016 ನವೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ನಡೆದ ನೋಟ್ ಬ್ಯಾನ್ ಬಳಿಕ ಭಾರತದಲ್ಲಿ 1000 ರೂಪಾಯಿ ನೋಟು ಚಲಾವಣೆಯಲ್ಲಿ ಇಲ್ಲ. 1000 ನೋಟಿನ ಬದಲಿಗೆ 2000 ಮೌಲ್ಯದ ದೊಡ್ಡ ನೋಟನ್ನು ಆರ್’ಬಿಐ ಚಲಾವಣೆಗೆ ತಂದಿತ್ತು. ಆದರೆ ಕೆಲ ಅನಿವಾರ್ಯ ಕಾರಣಗಳಿಂದ 2000 ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಯ್ತು. ಈಗ ಭಾರತದ ಆರ್ಥಿಕತೆಯಲ್ಲಿ ಚಲಾವಣೆಯಲ್ಲಿ ಹೆಚ್ಚು ಮೌಲ್ಯದ ನೋಟೆಂದರೆ ಅದು 500 ರೂಪಾಯಿ ನೋಟು ಮಾತ್ರ. ಆದರೆ ಈಗ 1000 ರೂಪಾಯಿ ನೋಟು ಮರಳಿ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಭ್ರಷ್ಟಾಚಾರ, ಕಾಲಧನ ತಡೆಯ ಕಾರಣ ನೀಡಿ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿತ್ತು. ಆದರೆ 2000 ಮೌಲ್ಯದ ನೋಟಿನಿಂದಾಗಿ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗಿತ್ತು. 2000 ಮೌಲ್ಯದ ನೋಟು ಭಾರತದ ಆರ್ಥಿಕತೆಗೆ ಸರಿಯಾಗಿ ಫಿಟ್ ಆಗಲಿಲ್ಲ. 2000 ಮೌಲ್ಯದ ನೋಟಿನಿಂದ ಕಾಲಧನ ಇನ್ನಷ್ಟು ಹೆಚ್ಚಾಗುವ ಅಪಾಯದ ಮುನ್ಸೂಚನೆ ಸಿಕ್ಕು ಅದನ್ನು ಚಲಾವಣೆಯಿಂದ ಹಿಂಪಡೆಯಲಾಯಿತು. ಜೊತೆಗೆ ಚಿಲ್ಲರೆ ಸಮಸ್ಯೆಯೂ ಉದ್ಭವವಾಯ್ತು.

ಈಗ 500 ಮುಖಬೆಲೆಯ ನೋಟುಗಳೇ ಹೆಚ್ಚು ಮೌಲ್ಯದ ನೋಟುಗಳಾಗಿದ್ದು,‌ ಇದರ ಚಲಾವಣೆ ಹೆಚ್ಚಾಗಿ ನಡೆಯುತ್ತಿದೆ. ಆದರೆ ಇದು ಸರ್ಕಾರಕ್ಕೆ ಖರ್ಚಿನ ಬಾಬತ್ತಾಗಿದೆ. 500 ಮುಖಬೆಲೆಯ ಹೆಚ್ಚಿನ ನೋಟುಗಳನ್ನು ಸರ್ಕಾರ ಅಥವಾ RBI ಮುದ್ರಿಸಬೇಕಾಗಿದೆ. ಕಡಿಮೆ ಮುಖಬೆಲೆಯ ನೋಟುಗಳು ವ್ಯವಹಾರಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ. RBI ಗೆ, ಬ್ಯಾಂಕುಗಳಿಗೆ ಸಾಗಾಟದ ಸಮಸ್ಯೆ ಸೇರಿದಂತೆ ಇನ್ನೂ ಕೆಲ ಸಮಸ್ಯೆಗಳನ್ನು ತಂದೊಡ್ಡುತ್ತಿವೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮತ್ತೆ ಚಲಾವಣೆಗೆ ತರುವ ಚರ್ಚೆ ಸರ್ಕಾರದ ಹಂತದಲ್ಲಿ ನಡೆಯುತ್ತಿದೆ ಎನ್ನಲಾಗಿತ್ತು. ಕೆಲವು ಉದ್ಯಮ ಸಂಬಂಧಿ ಪತ್ರಿಕೆಗಳು ಈ ಬಗ್ಗೆ ವರದಿ ಮಾಡಿವೆ.

Investment: ಈಗ ನಿಮ್ಮ ಬಳಿ ಇರುವ 10 ಲಕ್ಷ ರೂಪಾಯಿ ಹಣದ ಮೌಲ್ಯ 2050 ರಲ್ಲಿ ಎಷ್ಟಿರುತ್ತದೆ?

1000 ರೂಪಾಯಿಯ ಹೊಸ ನೋಟನ್ನು RBI ಬಿಡುಗಡೆ ಮಾಡಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈಗಾಗಲೇ ವಾಲ್ತಿಯಲ್ಲಿರುವ 500, 200, 100, 50 ರೂಪಾಯಿಯ ಹೊಸ ನೋಟುಗಳ ಮಾದರಿಯಲ್ಲೇ ಈ ನೋಟುಗಳು ಇರಲಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ 500 ರೂಪಾಯಿ ನೋಟಿಗಿಂತ ತುಸುವಷ್ಟೆ ದೊಡ್ಡದಾಗಿ ಇರಲಿದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here