Health: ಮಹಿಳೆಯರೇ ಈ ಮೂರು ವಸ್ತುಗಳನ್ನು ಈಗಲೇ ಬದಲಾಯಿಸಿ

0
193
Health

Health

ಇತ್ತೀಚೆಗೆ ಭಾರತದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಿದೆ. ಕೋವಿಡ್ ಬಳಿಕ ಭಾರತೀಯರ ನಿತ್ಯದ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈ ಬದಲಾವಣೆ ಒಳಿತಿಗಾಗಿಯೂ ಆಗಿದೆ, ಕೆಲವು ಕೆಡುಕಿಗಾಗಿಯೂ ಆಗಿದೆ. ಆದರೆ ಸದ್ಯದ ಒಳ್ಳೆಯ ಸುದ್ದಿಯೆಂದರೆ ಭಾರತೀಯರಿಗೆ ತುಸುವಾದರೂ ಆರೋಗ್ಯದ ಬಗ್ಗೆ ಕಾಳಜಿ ಮೂಡುತ್ತಿರುವುದು. ಪುರುಷರು ಜಿಮ್, ಜಾಗಿಂಗ್ ಇನ್ನಿತರೆಗಳ ಮೂಲಕ ಆರೋಗ್ಯ ವೃದ್ಧಿ ಮಾಡಿಕೊಳ್ಳುತ್ತಾರೆ. ಆದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಕಡಿಮೆ.

ಆದರೆ ಭಾರತದಲ್ಲಿ ಪುರುಷರಿಗಿಂತಲೂ ಹೆಚ್ಚು ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದು ಮಹಿಳೆಯರೇ. ಮಹಿಳೆಯರ ಆರೋಗ್ಯ ಸುಧಾರಣೆಗೆ ಈ ಕೂಡಲೇ ಅವರು ಮಾಡಬಹುದಾದ ಮೂರು ವಿಷಯಗಳು ಇಲ್ಲಿವೆ. ಈ ಮೂರು ವಿಷಯಗಳು ಕೇವಲ ಮಹಿಳೆಯರ ಆರೋಗ್ಯ ಮಾತ್ರವಲ್ಲದೆ ಇಡೀ ಕುಟುಂಬದ ಆರೋಗ್ಯವನ್ನು ಉತ್ತಮ ಪಡಿಸಲಿವೆ. ಮಾಡಬೇಕಾಗಿರುವ ಕೆಲಸ ಸರಳವಾದುದು, ಮೂರು ವಸ್ತುಗಳನ್ನು ಮನೆಯಿಂದ ಹೊರಗೆ ಬಿಸಾಡಬೇಕು ಅಷ್ಟೆ.

ಗೀಚು ಬಿದ್ದ ಟೆಪ್ಲಾನ್ ಪಾತ್ರೆಗಳು

Teflon

ಟೆಫ್ಲಾನ್​ನ ಪಾತ್ರೆಗಳು, ಪ್ಯಾನ್​ಗಳು, ಇನ್ನಿತರೆ ಅಡುಗೆ ಬಳಕೆ ವಸ್ತುಗಳು ಬಹಳ ಜನಪ್ರಿಯ. ಆದರೆ ಟೆಫ್ಲಾನ್​ನಿಂದ ಬಿಡುಗಡೆ ಆಗುವ ರಾಸಾಯನಿಕ ಮನುಷ್ಯನ ಡಿಎನ್​ಎ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಕೂಡಲೇ ಟೆಫ್ಲಾನ್ ಪಾತ್ರೆಗಳನ್ನು, ವಿಶೇಷವಾಗಿ ಗೀಚು ಬಿದ್ದ ಟೆಫ್ಲಾನ್ ಪಾತ್ರೆಗಳನ್ನು ಅಡುಗೆ ಮನೆಯಿಂದ ಹೊರಗೆ ಬಿಸಾಡಿ. ನಿಮ್ಮ ಹಾಗೂ ಕುಟುಂಬದವರ ಆರೋಗ್ಯ ಕಾಪಾಡಿ.

ಮೇಕಪ್ ಸಾಮಗ್ರಿ ಬದಲಾವಣೆ

Ayurvedic Cosmetics

ಮಹಿಳೆಯರು ಪ್ರಸಾಧನ ಪ್ರಿಯರು. ತಮ್ಮನ್ನು ತಾವು ಸುಂದರಗೊಳಿಸಿಕೊಳ್ಳಲು ಹಲವು ರೀತಿಯ ಮೇಕಪ್ ಬಳಸುತ್ತಾರೆ. ಮನೆಯಲ್ಲಿಯೂ ವಿವಿಧ ಬಗೆಯ ಕ್ರೀಮ್​ಗಳು, ಲಿಫ್​ಸ್ಟಿಕ್, ಫೌಂಡೇಶನ್, ಲೋಷನ್​ಗಳನ್ನು ಇಟ್ಟುಕೊಂಡು ದೆಹಕ್ಕೆ, ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಮೇಕಪ್​ ಹಚ್ಚಿಕೊಳ್ಳುವುದು ಕೆಟ್ಟದೇನೂ ಅಲ್ಲ. ಆದರೆ ನೀವು ಹಚ್ಚಿಕೊಳ್ಳುತ್ತಿರುವ ಕ್ರೀಂಗಳಲ್ಲಿ ಎಂಡೊಕ್ರೈನ್ ಡಿಸ್​ರಪ್ಟರ್ ರಾಸಾಯನಿಕಗಳು ಇರಬಹುದು. ಹಾಗಾಗಿ ಎಚ್ಚರಿಕೆಯಿಂದ ಕ್ರೀಂಗಳನ್ನು ಕೊಳ್ಳಿ. ಅಥವಾ ಆರ್ಯವೇಧಿಕ್ ಕ್ರೀಂ ಹಚ್ಚಿಕೊಳ್ಳಿ.

Year 2025: 2025 ರಲ್ಲಿ ಯಶಸ್ಸು ಗಳಿಸಲು ಈ 5 ಬದಲಾವಣೆ ಮಾಡಿಕೊಳ್ಳಿ

ಅಡುಗೆ ಎಣ್ಣೆ

Oil

ಅಡುಗೆ ಎಣ್ಣೆ ಇಲ್ಲದ ಅಡುಗೆ ಮನೆಯೇ ಇಲ್ಲ. ಆದರೆ ಮಹಿಳೆಯರೇ ಅಡುಗೆ ಎಣ್ಣೆ ಆರಿಸುವಾಗ ಎಚ್ಚರಿಕೆಯಿಂದ ಆಯ್ಕೆ ಮಾಡಿ. ಯಾವುದೇ ಕಾರಣಕ್ಕೂ ಕೋಲ್ಡ್ ಪ್ರೆಸ್ಡ್​ ಅಲ್ಲದ ಅಡುಗೆ ಎಣ್ಣೆಯನ್ನು ಬಳಸಲೇ ಬೇಡಿ. ಯಾವುದು ಕೋಲ್ಡ್ ಪ್ರೆಸ್ಡ್ ಯಾವುದು ರಾಸಾಯನಿಕ ಬಳಸಿ ತೆಗೆದ ಎಣ್ಣೆ ಎಂಬುದು ಬಾಟಲಿಯ ಮೇಲೆ ನಮೂದಾಗಿರುತ್ತದೆ, ಅಥವಾ ಅಂಗಡಿಯವನಿಗೆ ಕೇಳಿದರೂ ಗೊತ್ತಾಗುತ್ತದೆ. ತಪ್ಪದೇ ಕೋಲ್ಡ್ ಪ್ರೆಸ್ಡ್ ಎಣ್ಣೆಯನ್ನೇ ಅಡುಗೆಗೆ ಮಿತವಾಗಿ ಬಳಸಿ.

LEAVE A REPLY

Please enter your comment!
Please enter your name here