Yamaha: ಬಂದೇ ಬಿಟ್ಟಿತು ಹೈಬ್ರಿಡ್ ಬೈಕ್, ಮೈಲೇಜ್ ಎಷ್ಟು? ಬೆಲೆ ಎಷ್ಟು?

0
41
Yamaha

Yamaha

ಹೈಬ್ರಿಡ್ ಕಾರುಗಳು ಈಗ ಮಾರುಕಟ್ಟೆಯನ್ನು ಆಳುತ್ತಿವೆ. ಟೊಯೊಟಾ, ಮಾರುತಿ ಇನ್ನೂ ಕೆಲ ಕಂಪೆನಿಗಳು ಹೈಬ್ರಿಡ್ ಕಾರುಗಳ ನಿರ್ಮಾಣ ಮತ್ತು ಮಾರಾಟ ಮಾಡುತ್ತಿವೆ. ಇಂಧನ ಮತ್ತು ಬ್ಯಾಟರಿ ಎರಡನ್ನೂ ಬಳಸಿ ಓಡುವ ಈ ಕಾರುಗಳು ಸಾಮಾನ್ಯ ಕಾರುಗಳಿಗಿಂತಲೂ ಹೆಚ್ಚಿನ ಮೈಲೇಜ್ ನೀಡುತ್ತವೆ. ಹಾಗಾಗಿ ಈ ಕಾರುಗಳಿಗೆ ಬೇಡಿಕೆ ಹೆಚ್ಚು. ಇದೀಗ ಬೈಕ್ ನಲ್ಲಿಯೂ ಹೈಬ್ರಿಡ್ ಬೈಕ್ ಭಾರತೀಯ ಮಾರುಕಟ್ಟೆಗೆ ಬಂದಿವೆ.

ಯಮಹಾ ಮೋಟರ್ಸ್ ಸಂಸ್ಥೆ ಭಾರತದ ಮೊದಲ ಹೈಬ್ರಿಡ್ ಬೈಕ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಯಮಹಾ ಎಫ್  ಜಿ ಎಫ್ ಐ ಹೈಬ್ರಿಡ್ (Yamaha FZ Fi Hybrid) ಎಂದು ಈ ಬೈಕಿನ ಹೆಸರು. 149 ಸಿಸಿ ಶಕ್ತಿಯ ಎಂಜಿನ್ ಈ ಬೈಕ್ ನಲ್ಲಿದ್ದು, ಪ್ರಸ್ತುತ ಈ ಬೈಕ್ ರೇಸಿಂಗ್ ಬ್ಲೂ ಮತ್ತು ಸಯಾನ್ ಮೆಟಾಲಿಕ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಮಾತ್ರವೇ ಲಭ್ಯ ಇದೆ.

ಈ ಬೈಕ್ ನಲ್ಲಿ ಕೆಲ ಹೊಸ ತಂತ್ರಜ್ಞಾನಗಳನ್ನು ಯಮಹಾ ಸಂಸ್ಥೆ ಬಳಸಿದೆ. ಹೈಬ್ರಿಡ್ ಆಗಿರುವ ಕಾರಣ, ಈ ಬೈಕ್ ಚಲಿಸಲು ಇಂಧನದ ಜೊತೆಗೆ ಬ್ಯಾಟರಿಯ ಶಕ್ತಿಯನ್ನು‌ ಸಹ ಬಳಸಲಿದೆ. ಇದರ ಜೊತೆಗೆ ಮತ್ತೊಂದು ನವೀನ ತಂತ್ರಜ್ಞಾನ ಇದರಲ್ಲಿದೆ. ಈ ಬೈಕ್ ನಿಂತಾಗ ಎಂಜಿನ್ ತನ್ನಂತಾನೆ ಆಫ್ ಆಗಲಿದೆ. ಮತ್ತೆ ಕ್ಲಚ್ ಬಿಟ್ಟಾಗ ತನ್ನಿಂದ ತಾನೇ ಎಂಜಿನ್ ಆನ್ ಆಗಿ ಮುಂದೆ ಚಲಿಸಲಿದೆ. ಇದರಿಂದಾಗಿ ಈ ಬೈಕ್ ನ ಮೈಲೇಜ್ ಇದೇ ಸಾಮರ್ಥ್ಯದ ಇತರೆ ಬೈಕುಗಳಿಗಿಂತಲೂ 25-30% ಹೆಚ್ಚಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ‌.

Tesla: ಭಾರತಕ್ಕೆ ಬರುತ್ತಿದೆ ಟೆಸ್ಲಾ, ಕಾರಿನ ಬೆಲೆ ಎಷ್ಟಿರಲಿದೆ?

ಈ ಹೊಸ ಬೈಕ್ ನಲ್ಲಿ ರೈಡರ್‌ ಗಳ ಅನುಕೂಲತೆಗಾಗಿ 4.2 ಇಂಚಿನ ಬಣ್ಣದ ಟಿ ಎಫ್ ಟಿ ಡಿಸ್‌ಪ್ಲೇ ಒದಗಿಸಲಾಗಿದೆ. ಇದು ವೈ-ಕನೆಕ್ಟ್ ಆಪ್ ಮೂಲಕ ಸ್ಮಾರ್ಟ್‌ ಫೋನ್‌ಗೆ ಸಂಪರ್ಕಗೊಳ್ಳುತ್ತದೆ. ಗೂಗಲ್ ಮ್ಯಾಪ್‌ ಜೊತೆಗೆ ಜೋಡಿಸಲಾಗಿರುವ ಟರ್ನ್-ಬೈ-ಟರ್ನ್ (ಟಿಬಿಟಿ) ನ್ಯಾವಿಗೇಷನ್ ಸೌಲಭ್ಯವನ್ನು ಹೊಂದಿದ್ದು, ಇದು ರಸ್ತೆಯ ದಾರಿ, ದಿಕ್ಕುಗಳು ಮತ್ತು ಸಣ್ಣ ಸಣ್ಣ ತಿರುವುಗಳ ವಿವರಗಳನ್ನು ತೋರಿಸುತ್ತದೆ. ಹ್ಯಾಂಡಲ್ ಬಾರ್ ನಲ್ಲಿ ಸಹ ಬದಲಾವಣೆ ಮಾಡಲಾಗಿದ್ದು ಇನ್ನಷ್ಟು ಕಂಫರ್ಟ್ ಅನ್ನು ನೀಡಲಾಗಿದೆ. ಪೆಟ್ರೋಲ್ ಟ್ಯಾಂಕ್ ಹಾಗೂ ಸ್ವಿಚ್ ಗಳಲ್ಲಿಯೂ ಬದಲಾವಣೆ ಮಾಡಲಾಗಿದ್ದು ರೈಡಿಂಗ್ ಗುಣಮಟ್ಟವನ್ನು ಉತ್ತಮ ಪಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಈ ಬೈಕ್ ನ ಎಕ್ಸ್ ಶೋ ರೂಂ ಬೆಲೆ 1.45 ಲಕ್ಷ ರೂಪಾಯಿಗಳು ಇರಲಿದೆ.

LEAVE A REPLY

Please enter your comment!
Please enter your name here