Yamaha RX100: ಮತ್ತೆ ಬರುತ್ತಿದೆ RX100 ಆದರೆ ಈ ಬಾರಿ ಭಿನ್ನ ರೂಪ, ಇನ್ನಷ್ಟು ಶಕ್ತಿಶಾಲಿ

0
110
Yamaha RX100

Yamaha RX100

RX100 ಬಹುಕಾಲ ಭಾರತೀಯರ ಮೆಚ್ಚಿನ ಬೈಕ್ ಆಗಿತ್ತು. ಬುಲೆಟ್’ಗಳ ಭಾರತೀಯರು ಅತಿಯಾಗಿ ಮೆಚ್ಚಿದ ಬೈಕ್ ಎಂದರೆ ಅದು RX100. ಸಣ್ಣನೆ ದೇಹ ಆದರೆ ಅತ್ಯುತ್ತಮ ಫರ್ಮಾಮೆನ್ಸ್, ಗಮನ ಸೆಳೆವ ಸೌಂಡ್ ಹೊಂದಿದ್ದ RX100 ಯುವಕರ ಮೆಚ್ಚಿನ ಬೈಕ್ ಆಗಿತ್ತು. ಈಗಲೂ ಹಲವರು ಈ ಬೈಕ್ ಅನ್ನು ಮನೆಗಳಲ್ಲಿ ಇಟ್ಟುಕೊಂಡಿದ್ದಾರೆ. ತೀರ ಅಪರೂಪಕ್ಕೆ ರಸ್ತೆಗಳಲ್ಲಿ ನೋಡಲು ಸಿಗುತ್ತದೆ. ಇದೀಗ ಈ ಬೈಕ್ ಅನ್ನು ಮತ್ತೆ ಬಿಡುಗಡೆ ಮಾಡಲು ಸಜ್ಜಾಗಿದೆ ಯಮಹಾ, ಆದರೆ ಹೊಸ ಡಿಸೈನ್ ಜೊತೆಗೆ.

2002 ರಲ್ಲಿ  RX100 ಬೈಕುಗಳ ತಯಾರಿಕೆಯನ್ನು ನಿಲ್ಲಿಸಿಬಿಟ್ಟಿತು ಯಮಹಾ. ಆದರೆ ಈಗ ಮತ್ತೆ RX100 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. RX100 ನ ಮೂಲ ಲುಕ್ ಅನ್ನು ತುಸು ಹಾಗೆಯೇ ಉಳಿಸಿಕೊಂಡು ಅದಕ್ಕೆ ಕೆಲವು ಆಧುನಿಕ ಡಿಸೈನ್ ಅನುಸಾರ ಕೆಲವು ಭಾಗಗಳನ್ನು ಸೇರಿಸಿ ಹೊಸ ಅವತಾರದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಬೈಕ್’ನ ಶಕ್ತಿಯನ್ನು ಸಹ ಹೆಚ್ಚು ಮಾಡಲಾಗಿದ್ದು, ಈ ಬಾರಿ 250 ಸಿಸಿ ಯಲ್ಲಿ ಬೈಕ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ.

ಹೊಸ ಯಮಹ RX100 ನಲ್ಲಿ ಟೆಲೊಸ್ಕೋಪಿಕ್ ಶಾಕ್ಸ್ ಅಬಸಾರ್ಬರ್ ಅನ್ನು ಅಳವಡಿಸಲಾಗಿದೆ. ಡಿಜಿಟಲ್ ಇನ್’ಸ್ಟ್ರುಮೆಂಟಲ್ ಕ್ಲಸ್ಟರ್, ಮೋನೊ ಶಾಕ್ ಸಸ್ಪನ್ಸ್, ಬ್ಲೂ ಟೂತ್ ಕನೆಕ್ಟಿವಿಟಿ, ಕಾಲ್ ಅಲರ್ಟ್, ಟ್ರಾಲ್ಷನ್ ಕಂಟ್ರೋಲ್, ಮೂರು ವಿದಧ ಡ್ರೈವ್ ಮೋಡ್ ಗಳನ್ನು ಸಹ ಸೆರಿಸಲಾಗಿದೆ. ಆಧುನಿಕ ಜಮಾನಾದ ಯುವಕರ ಅಗತ್ಯಗಳಿಗೆ ತಕ್ಕಂತೆ  RX100 ಬೈಕ್ ಅನ್ನು ಬದಲಾವಣೆ ಮಾಡಲಾಗಿದ್ದು, ಕೆಲವು ಅಗತ್ಯ ಹೊಸ ತಂತ್ರಜ್ಞಾನವನ್ನು ಸೇರಿಸಲಾಗಿದೆ.

Bajaj Bike: ಬರುತ್ತಿದೆ ಹೊಸ ಅವೇಂಜರ್ ಬೈಕ್, ಅದೂ ಕಡಿಮೆ ಬೆಲೆಗೆ

ಯಮಹಾ ಸಂಸ್ಥೆ, ಭಾರತೀಯ ರಸ್ತೆಗಳಿಗೆ, ಭಾರತದ ಮಧ್ಯಮ ವರ್ಗದ ಕುಟುಂಬಗಳನ್ನು, ಯುವಕರನ್ನು ಗಮನದಲ್ಲಿಟ್ಟುಕೊಂಡು ಬೈಕುಗಳನ್ನು ಬಿಡುಗಡೆ ಮಾಡಿಕೊಂಡು ಬರುತ್ತಿದೆ. ಅದರಂತೆ ಈಗ RX100 250 ಸಿಸಿ ಬೈಕಿನ ಬೆಲೆಯನ್ನು ತನ್ನ ಪ್ರತಿಸ್ಪರ್ಧಿ 250 ಸಿಸಿ ಬೈಕುಗಳಿಗಿಂತಲೂ ಕಡಿಮೆಯೇ ಇರಿಸಲಿದೆ. ಮೂಲಗಳ ಪ್ರಕಾರ ಹೊಸ RX100 250 ಸಿಸಿ ಬೈಕಿನ ಎಕ್ಸ್ ಶೋ ರೂಂ ಬೆಲೆ ಸುಮಾರು 1.40 ಲಕ್ಷ ರೂಪಾಯಿ ಇರಲಿದೆಯಷ್ಟೆ.

LEAVE A REPLY

Please enter your comment!
Please enter your name here