Site icon Samastha News

Yamaha: ಯಮಹಾ ಹೊರತಂದಿದೆ ಕಡಿಮೆ ಬೆಲೆಗೆ ಅತ್ಯುತ್ತಮ ಬೈಕ್

Yamaha XSR155

Yamaha

ಯಮಹಾ ದಶಕಗಳಿಂದಲೂ ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಉಳಿಸಿಕೊಂಡು ಬಂದಿದೆ. RX ಅಂಥಹಾ ಲೆಜೆಂಡರಿ ಬೈಕ್ ಜೊತೆಗೆ FZ ಸೇರಿದಂತೆ ಇನ್ನೂ ಹಲವು ಅತ್ಯುತ್ತಮ ಬೈಕುಗಳನ್ನು ನೀಡಿದೆ. ಬಜಾಜ್, ಟಿವಿಎಸ್, ರಾಯಲ್ ಎನ್’ಫೀಲ್ಡ್, ಹೀರೋ ಮತ್ತು ಹೋಂಡಾ ಗಳು ನೀಡುತ್ತಿರುವ ಪ್ರಬಲ ಸ್ಪರ್ಧೆಯ ನಡುವೆಯೂ ಗಟ್ಟಿಯಾಗಿ ಮಾರುಕಟ್ಟೆಯಲ್ಲಿ ನಿಂತಿದೆ.

ಆದರೆ ಇತ್ತೀಚೆಗೆ ಯಮಹಾದ ಬೈಕ್ ಸೇಲ್ ತುಸು ಕಡಿಮೆ ಆಗಿದೆ. ರಾಯಲ್ ಎನ್’ಫೀಲ್ಡ್ ಮತ್ತು ಯುವಕರ ಮೆಚ್ಚಿನ ಡ್ಯೂಕ್ ಬೈಕುಗಳ ಭರಾಟೆಯ ನಡುವೆ ಯಮಹಾದ ಹವಾ ತುಸು ತಗ್ಗಿದೆ ಎಂಬುದು ಸ್ಪಷ್ಟ. ಆದರೆ ಮಾರುಕಟ್ಟೆಯಲ್ಲಿ ಉಳಿದುಕೊಳ್ಳಲು ಯಮಹಾ ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ತನ್ನ ಲೆಜೆಂಡರಿ ಬೈಕ್ ಆಗಿರುವ RX ಅನ್ನು ಮರು ವಿನ್ಯಾಸ ಮಾಡಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಅದರ ಜೊತೆಗೆ ಇದೀಗ ಮತ್ತೊಂದು ವಿಶಿಷ್ಟ ವಿನ್ಯಾಸದ ಕಡಿಮೆ ಬೆಲೆಯ ಬೈಕ್ ಅನ್ನು ಮಾರುಕಟ್ಟೆಗೆ ತರಲು ರೆಡಿಯಾಗಿದೆ.

ಯಮಹಾ ಸಂಸ್ಥೆ ಇದೀಗ XSR 155 ಬೈಕನ್ನು ಮಾರುಕಟ್ಟೆಗೆ ತರುತ್ತಿದೆ. ರೆಟ್ರೋ ಮತ್ತು ಸ್ಪೋರ್ಟಿ ಎರಡು ಮಾದರಿಯ ವಿನ್ಯಾಸವನ್ನು ಈ ಬೈಕ್ ಒಳಗೊಂಡಿದ್ದು, ನೋಡಲು ಅದ್ಭುತ ಲುಕ್ ಹೊಂದಿದೆ. 150 ಸಿಸಿ ವಿಭಾಗದಲ್ಲಿ ಈಗಿರುವ ಬೈಕುಗಳಲ್ಲೆ ಅದ್ಭುತವಾದ ಬೈಕ್ ಇದಾಗಿದೆ. ಈ ಬೈಕಿನ ಮುಂದೆ ಕಾಣುವ ಏರ್ ಕೂಲ್ಡ್ ವೆಂಟಿಲೇಷನ್ ಮತ್ತು ಸಿಂಗಲ್ ಮೋನೊ ಸಸ್ಪೆನ್ಷನ್ ಈ ಬೈಕಿಗೆ ರಾಯಲ್ ಲುಕ್ ನೀಡಿದೆ‌‌.

Maruti Car: ಮಾರುತಿಯ ಹೊಸ ಕಾರು, ನೋಡಲು ಬೊಂಬಾಟ್, ಮೈಲೇಜ್ ಬಂಪರ್

ಒಳ್ಳೆಯ ಡಿಸೈನ್ ಜೊತೆಗೆ ತಂತ್ರಜ್ಞಾನವನ್ನು ಸಹ ಸೇರಿಸಲಾಗಿದೆ. ಡಿಜಿಟಲ್ ಡಿಸ್ಪ್ಲೆ, ಎಲ್’ಇಡಿ ಹೆಡ್ ಲೈಟ್, ಟ್ರಾಕ್ಷನ್ ಕಂಟ್ರೋಲ್ ಸಹ ಇದರಲ್ಲಿ ಇರಲಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ರೈಡ್ ಮೋಡ್ ಬದಲಾವಣೆ, ಡ್ಯುವೆಲ್ ಎಬಿಎಸ್’ಗಳು ಸೇಫ್ಟಿ ಫೀಚರ್ ಗಳಾಗಿವೆ. ಒಳ್ಳೆಯ ಪವರ್ ಸಹ ಈ ಬೈಕ್’ನಲ್ಲಿ ಇದ್ದು 19 ಹಾರ್ಸ್ ಪವರ್ ಮತ್ತು 14 ನ್ಯೂಟನ್ ಮೀಟರ್ ಟಾರ್ಕ್ ಉತ್ಪತ್ತಿ ಆಗುವ ಪವರ್ ಫುಲ್ ಎಂಜಿನ್ ಇದಕ್ಕೆ ಅಳವಡಿಸಲಾಗಿದೆ. ಆರು ಗೇರುಗಳನ್ನು ಹೊಂದಿರುವ ಈ ಗಾಡಿ ಹೈವೆ ಮತ್ತು ಟ್ರಾಫಿಕ್ ಎರಡಕ್ಕೂ ಹೇಳಿ ಮಾಡಿಸಿದ್ದಾಗಿದೆ‌. ಬೆಂಗಳೂರಿನಲ್ಲಿ ಇದರ ಬೆಲೆ ಸುಮಾರು 1.50 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

Exit mobile version