Sourav Joshi: 3 ಕೋಟಿ ಬೆಲೆಯ ಕಾರು ಖರೀದಿಸಿದ 24 ವರ್ಷದ ಯೂಟ್ಯೂಬರ್

0
39
Youtuber

Sourav Joshi

ಕೋವಿಡ್ ಬಳಿಕ ಯೂಟ್ಯೂಬರ್ ಗಳು ಗಲ್ಲಿಗೊಬ್ಬರು ಹುಟ್ಟಿಕೊಂಡಿದ್ದಾರೆ. ಆದರೆ ಇವರಲ್ಲಿ ಯಶಸ್ಸು ಗಳಿಸುವುದು ಕೆಲವೇ ಮಂದಿ ಮಾತ್ರ. ಆದರೆ ಯೂಟ್ಯೂಬ್ ಕೈ ಹಿಡಿಯಿತೆಂದರೆ ಆ ವ್ಯಕ್ತಿಯ ಅದೃಷ್ಟ ಖುಲಾಯಿಸಿದಂತೆ ಸರಿ. ಹಲಾವರು ಮಂದಿ ಯೂಟ್ಯೂಬರ್ ಗಳು ಯೂಟ್ಯೂಬ್ ಕಂಟೆಂಟ್ ಕ್ರಿಯೇಷನ್ ಅನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಪ್ರತಿ ತಿಂಗಳು ಕೋಟ್ಯಂತರ ಹಣ ಗಳಿಸುತ್ತಿದ್ದಾರೆ. ಇದೀಗ 24 ವರ್ಷದ ಯೂಟ್ಯೂಬರ್ ಒಬ್ಬ ಯೂಟ್ಯೂಬ್ ನಿಂದ ಗಳಿಸಿದ ಹಣದಲ್ಲಿ 3 ಕೋಟಿ ಮೌಲ್ಯದ ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ.

ಹಿಂದಿ ಯೂಟ್ಯೂಬ್ ವಿಡಿಯೋಗಳನ್ನು ನೋಡುವವರಿಗೆ ಸೌರವ್ ಜೋಶಿ ಹೆಸರು ಗೊತ್ತೆ ಇರುತ್ತದೆ. ಕಳೆದ ಕೆಲವು ವರ್ಷಗಳಿಂದ ಸೌರವ್ ಜೋಶಿ ತಮ್ಮ ದಿನನಿತ್ಯದ ಜೀವನವನ್ನೇ ವಿಡಿಯೋ ಮಾಡಿ ಡೈಲಿ ವ್ಲಾಗ್ ಹೆಸರಲ್ಲಿ ಯೂಟ್ಯೂಬ್ ಗೆ ಅಪ್ ಲೋಡ್ ಮಾಡುತ್ತಿದ್ದಾರೆ. ವ್ಲಾಗ್ ವಿಭಾಗದಲ್ಲಿ ಭಾರತದ ನಂಬರ್ 1 ವ್ಲಾಗರ್ ಸೌರವ್ ಜೋಶಿ. ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಗಳಲ್ಲಿ ಸೌರವ್ ಜೋಶಿ ಸಹ ಒಬ್ಬರು.

ಇತ್ತೀಚೆಗಷ್ಟೆ ಸೌರವ್ ಜೋಶಿ, 3 ಕೋಟಿ ಬೆಲೆಯ ಮರ್ಸಿಡೀಸ್ ಬೆಂಜ್ ಜಿ ವ್ಯಾಗನ್ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದ್ದಾರೆ. ಜಿ ವ್ಯಾಗನ್ ಕಾರು ಪ್ರಸ್ತುತ ಭಾರತದಲ್ಲಿ ಬಹಳ ಟ್ರೆಂಡ್ ನಲ್ಲಿರುವ ದುಬಾರಿ ಕಾರಾಗಿದ್ದು, ಹಲವು ಶ್ರೀಂತರು, ರಾಜಕಾರಣಿಗಳಿಗೇ ಇಷ್ಟು ದುಬಾರಿ ಕಾರು ಖರೀದಿ ಮಾಡಲು ಆಗಿಲ್ಲ. ಆದರೆ 24 ವರ್ಷದ ಯೂಟ್ಯೂಬರ್, ಯೂಟ್ಯೂಬ್ ನಿಂದ ಗಳಿಸಿದ ಹಣದಿಂದ ಜಿ ವ್ಯಾಗನ್ ಕಾರು ಖರೀದಿ ಮಾಡಿದ್ದಾರೆ.

ಅಂದಹಾಗೆ ಯೂಟ್ಯೂಬರ್ ಸೌರವ್ ಜೋಶಿ ಇದೇ ಮೊದಲ ಬಾರಿಗೆ ಐಶಾರಾಮಿ ಕಾರು ಖರೀದಿ ಮಾಡುತ್ತಿದ್ದಾರೆ ಎಂದೇನೂ ಅಲ್ಲ. ಈ ಹಿಂದೆ ಸಹ ಕೆಲವು ದುಬಾರಿ ಬೆಲೆಯ ಐಶಾರಾಮಿ ಕಾರುಗಳಿವೆ. 2 ಕೋಟಿ ಬೆಲೆಯ ಪೋರ್ಶೆ ಬಾಕ್ಸ್ ಟರ್, 50 ಲಕ್ಷ ಬೆಲೆಯ ಟೊಯೊಟಾ ಪಾರ್ಚುನರ್ ಲಿಜೆಂಡರ್, 40 ಲಕ್ಷ ಬೆಲೆಯ ಮಹೀಂದ್ರಾ ಥಾರ್ ಕಾರು, ಇನ್ನೂ ಕೆಲವು ಸಣ್ಣ ಪುಟ್ಟ ಕಾರುಗಳು ಸಹ ಇವೆ.

Ashwini Puneeth Rajkumar: ಪುನೀತ್ ಬಿಟ್ಟು ಹೋದ ಸತ್ ಕಾರ್ಯ ಮುಂದುವರೆಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಸೌರವ್ ಜೋಶಿ, ಭಾರತದ ಜನಪ್ರಿಯ ಮತ್ತು ಶ್ರೀಮಂತ ಯೂಟ್ಯೂಬರ್ ಗಳಲ್ಲಿ ಅತ್ಯಂತ ಕಿರಿಯ ಯೂಟ್ಯೂಬರ್ ಆಗಿದ್ದಾರೆ. ಸೌರವ್ ಜೋಶಿಯ ಒಟ್ಟು ಆಸ್ತಿ ಮೌಲ್ಯ ಸುಮಾರು 300 ಕೋಟಿಗೂ ಹೆಚ್ಚು ಎನ್ನಲಾಗುತ್ತದೆ.

LEAVE A REPLY

Please enter your comment!
Please enter your name here