Zepto: ಮುಂಬೈ ಬಿಟ್ಟು ಬೆಂಗಳೂರಿಗೆ ಬರುತ್ತಿದೆ 30 ಸಾವಿರ‌ ಕೋಟಿ‌ ಮೌಲ್ಯದ ಕಂಪೆನಿ

0
142
Zepto

Zepto

ಬೆಂಗಳೂರು ಭಾರತದ ಸ್ಟಾರ್ಟ್ ಅಪ್ ರಾಜಧಾನಿ. ದೇಶದ ಮಾತ್ರವಲ್ಲ ವಿದೇಶದ ಎಷ್ಟೋ ಮಂದಿ ಹೊಸ ಆಂಟ್ರೊಫಿನರ್ (ನವ್ಯೋದ್ಯಮಿ) ಗಳು ಹೊಸ‌ ಉದ್ಯಮ ಪ್ರಾರಂಭ ಮಾಡಲೆಂದು ಬೆಂಗಳೂರಿಗೆ ಬರುತ್ತಾರೆ. ಇಂದು ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಹೆಸರು ಮಾಡಿರುವ ಹಲವಾರು ಸಂಸ್ಥೆಗಳು ಪ್ರಾರಂಭವಾಗಿದ್ದು ಬೆಂಗಳೂರಿನಲ್ಲೆ. ಹಾಗಾಗಿ ನವ್ಯೋದ್ಯಮಿಗಳ ಸ್ವರ್ಗ ಬೆಂಗಳೂರು.

ಇದೀಗ ಅತ್ಯಂತ ವೇಗವಾಗಿ‌ ಬೆಳೆದು ಕಡಿಮೆ ಅವಧಿಯಲ್ಲಿಯೇ 30 ಸಾವಿರ ಕೋಟಿ ಮೌಲ್ಯದ ಸಂಸ್ಥೆ ಎನಿಸಿಕೊಂಡ ಜೆಪ್ಟೊ ಈಗ ಮುಂಬೈ ತೊರೆದು ಬೆಂಗಳೂರಿಗೆ ಸ್ಥಳ ಬದಲಾವಣೆ ಮಾಡುತ್ತಿದೆ. ಇದಕ್ಕೆ ಕಾರಣವೂ ಇದೆ.

ಜೆಪ್ಟೊ ಸಂಸ್ಥೆ ಮುಂಬೈನ ಅಂಧೇರಿ ವೆಸ್ಟ್ ನ ಜೋಗೇಶ್ವರಿ ಬಿಲ್ಡಿಂಗ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿತ್ತು. ಅಲ್ಲಿ ನೂರಾರು‌ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಬೆಂಗಳೂರಿನಲ್ಲಿ ಸಹ ಈ ಸಂಸ್ಥೆಯ ಸುಮಾರು  700 ಜನ ಕಾರ್ಯ‌ ನಿರ್ವಹಿಸುತ್ತಿದ್ದರು. ಆದರೆ ಈಗ ಮುಂಬೈನ ಕಚೇರಿಯನ್ನು ಜೆಪ್ಟೊ ತೊರೆಯುತ್ತಿದೆ. ಮೂಲಭೂತ ಸೌಲಭ್ಯದ ಕೊರತೆ ಸೇರಿದಂತೆ ಇನ್ನೂ ಕೆಲವು ಕಾರಣಗಳನ್ನು ನೀಡಿ ಜೆಪ್ಟೊ ಈಗ ಬೆಂಗಳೂರಿಗೆ ಶಿಫ್ಟ್ ಆಗಲಿದೆ.

ಜೆಪ್ಟೊ ಸಂಸ್ಥೆಯ ಸಹ ಸಂಸ್ಥಾಪಕ ಕೈವಲ್ಯ ವೊಹ್ರ ಬೆಂಗಳೂರಿನ ನಿವಾಸಿಯೇ ಆಗಿದ್ದು, ಅವರು ಬೆಂಗಳೂರಿನ ಕಚೇರಿ ನೋಡಿಕೊಳ್ಳುತ್ತಿದ್ದರು. ಆಗಾಗ್ಗೆ ಮುಬೈಗೆ ಹೋಗಿ ಬರುತ್ತಿದ್ದರು. ಈಗ ಇಡೀ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಈಗ ಕೆಲಸ ಮಾಡುತ್ತಿರುವ 700 ಸಿಬ್ಬಂದಿಯ ಜೊತೆಗೆ ಇನ್ನೂ 400 ಸಿಬ್ಬಂದಿಯನ್ನು ಜೆಪ್ಟೊ ಸೇರಿಸಿಕೊಳ್ಳಲಿದೆ. ಅಲ್ಲದೆ ಈಗ ಮುಂಬೈನಲ್ಲಿ ಜೆಪ್ಟೊಗಾಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಸಹ ಹೆಚ್ಚಿನ ಸಂಬಳ ನೀಡಿ ಬೆಂಗಳೂರಿಗೆ ಕರೆಸಿಕೊಳ್ಳಲಾಗುತ್ತಿದೆ‌. ಬೆಂಗಳೂರು ವಿಮಾನ‌ ನಿಲ್ದಾಣದ ಹಾದಿಯಲ್ಲಿ ಜೆಪ್ಟೊ ಹೊಸ ಕಚೇರಿ ತಲೆ ಎತ್ತಲಿದೆ ಎನ್ನಲಾಗುತ್ತಿದೆ. ಈ ಕಚೇರಿಯು ಬೃಹತ್ ಆಗಿರಲಿದ್ದು ಸುಮಾರು 2000 ಸಿಬ್ಬಂದಿಗಾಗಿ ಕಚೇರಿಯನ್ನು‌ ವಿನ್ಯಾಸ ಮಾಡಲಾಗುತ್ತಿದೆ.

Ethanol: ಶೀಘ್ರವೇ ಬರಲಿವೆ ಎಥೆನಾಲ್‌ ಚಾಲಿತ ವಾಹನಗಳು, ಸಚಿವ ಗಡ್ಕರಿ ವಿಶ್ವಾಸ

ಜೆಪ್ಟೊ, ಡೆಲಿವರಿ ಸಂಸ್ಥೆ (ಕ್ವಿಕ್ ಕಾಮರ್ಸ್) ಸಂಸ್ಥೆಯಾಗಿದ್ದು ಇಬ್ಬರು ನವ ಯುವಕರು ಆರಂಭಿಸಿದ ಸಂಸ್ಥೆಯಾಗಿದೆ. ಅತ್ಯಂತ ತ್ವರಿತವಾಗಿ ಬ್ಯುಸಿನೆಸ್ ಅನ್ನು ದೇಶದಾದ್ಯಂತ ವ್ಯಾಪಿಸಿರುವ ಜೆಪ್ಟೊ, ವಿದೇಶಗಳಲ್ಲಿಯೂ ಕಾರ್ಯ ವ್ಯಾಪ್ತಿ ವಿಸ್ತರಣೆ ಮಾಡುವ ಆಲೋಚನೆ ಹೊಂದಿದೆ‌. ಜೆಪ್ಟೊದ ಹಾಲಿ ಮೌಲ್ಯ 30 ಸಾವಿರ ಕೋಟಿ ರೂಪಾಯಿಗಳು.

LEAVE A REPLY

Please enter your comment!
Please enter your name here