zomato: ಡೆಲಿವರಿ ಬಾಯ್ ವೇಷತೊಟ್ಟು, ಅವರ ಕಷ್ಟ ಅರಿತುಕೊಂಡ ಜೊಮ್ಯಾಟೊ ಮಾಲೀಕ

0
82
Deependra Ghoyal

zomato

ಜೊಮ್ಯಾಟೊ ಭಾರತದ ಅತಿ ದೊಡ್ಡ ಫುಡ್ ಡೆಲಿವರಿ ಸಂಸ್ಥೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ ಜೊಮ್ಯಾಟೊ ತನ್ನ ಸೇವೆಯನ್ನು ವಿಸ್ತರಿಸಿದೆ. ಈ ಸಂಸ್ಥೆಯ ಮಾಲೀಕ ದೀಪೇಂದ್ರ ಘೋಯಲ್. ಕಂಪೆನಿಯು ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಜೊತೆಗೆ ತನ್ನ ಸಂಸ್ಥೆಯ ಡೆಲಿವರಿ ಪಾರ್ಟನರ್​ಗಳಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದಾರೆ. ಹಾಗಾಗಿ ವೀಕೆಂಡ್​ಗಳಲ್ಲಿ ತಾವೇ ಫುಡ್ ಡೆಲಿವರಿ ಮಾಡಲು ಹೋಗುತ್ತಾರೆ. ಆ ಮೂಲಕ ಗ್ರಾಹಕರು, ಹೋಟೆಲ್​ನವರು ಹಾಗೂ ಡೆಲಿವರಿ ಪಾರ್ಟನರ್​ಗಳ ಜೊತೆಗೆ ನೇರವಾಗಿ ಮಾತನಾಡಿ ಅವರ ಕಷ್ಟಸುಖ ಕೇಳುತ್ತಾರೆ. ತಮ್ಮ ಸೇವೆಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುತ್ತಾರೆ.

ನಿನ್ನೆಯಷ್ಟ ದೀಪೇಂದ್ರ ಘೋಯಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದರು, ಈ ವಾರಾಂತ್ಯದಲ್ಲಿ ಅವರು ಡೆಲಿವರಿ ಏಜೆಂಟ್ ಆಗಿ ಫುಡ್ ಡೆಲಿವರಿ ಮಾಡಿದ್ದು ಅದರ ವಿಡಿಯೋ ಹಂಚಿಕೆ ಮಾಡಿಕೊಂಡಿದ್ದರು. ಕೆಲವು ಮೌಲ್ಯಯುತವಾದ ಪಾಠಗಳನ್ನು ಈ ಅವಧಿಯಲ್ಲಿ ಕಲಿತಿದ್ದಾಗಿ ಸಹ ಅವರು ಹೇಳಿಕೊಂಡಿದ್ದರು. ದೀಪೇಂದ್ರ, ಡೆಲಿವರಿ ಮಾಡಲು ಹೋದಾಗ ಕೆಲವು ಸಮಸ್ಯೆಗಳನ್ನು ಎದುರಿಸಿದ್ದು ಅದರ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.

ದೀಪೇಂದ್ರ ಘೋಯಲ್, ಡೆಲಿವರಿ ಏಜೆಂಟ್ ಆಗಿ ಗುರುಗ್ರಾಮದಲ್ಲಿ ದೀಪೇಂದ್ರ ಘೋಯಲ್ ಕೆಲಸ ಮಾಡಿದ್ದಾರೆ. ಬೈಕ್​ನಲ್ಲಿಯೇ ಡೆಲಿವರಿ ನೀಡಿದ್ದಾರೆ ದೀಪೇಂದ್ರ, ಮೊದಲ ಆರ್ಡರ್ ಡೆಲಿವರಿ ಮಾಡಿದ ಬಳಿಕ ಎರಡನೇ ಆರ್ಡರ್ ಬಂದಿದೆ. ಗುರುಗ್ರಾಮದ ಆಂಬಿಯನ್ಸ್​ ಮಾಲ್​ನ ಹಲ್ದಿರಾಮ್ಸ್​ನಿಂದ ಆರ್ಡರ್ ಪಡೆದು ಅದನ್ನು ಡೆಲಿವರಿ ಮಾಡಬೇಕಿತ್ತಂತೆ.

Swiggy: ಸಸ್ಯಹಾರಿಗಳಾಗಿಬಿಟ್ಟರೆ ಬೆಂಗಳೂರಿಗರು, ಜೊಮ್ಯಾಟೊ‌ ಹೇಳುತ್ತಿರುವುದೇನು?

ಜೊಮ್ಯಾಟೊ ಟಿ ಶರ್ಟ್ ಮತ್ತು ಜೊಮ್ಯಾಟೊ ಬ್ಯಾಗ್ ನೇತು ಹಾಕಿಕೊಂಡು ಮಾಲ್​ಗೆ ಹೋದ ಕೂಡಲೇ ಮುಖ್ಯ ಬಾಗಿಲಿನಿಂದ ಡೆಲಿವರಿ ಏಜೆಂಟ್​ಗಳು ಬರುವಂತಿಲ್ಲ ಬೇರೊಂದು ಬಾಗಿಲಿನಿಂದ ಒಳಗೆ ಹೋಗಲು ಹೇಳಿದ್ದಾರೆ. ಆ ನಂತರ ಮತ್ತೊಮ್ಮೆ ದೀಪೇಂದ್ರ ಘೋಯಲ್ ಹೋಗಿ ಕೇಳಿದ್ದಕ್ಕೆ ಡೆಲಿವರಿ ಏಜೆಂಟ್​ಗಳು ಲಿಫ್ಟ್​ಗಳನ್ನು ಸಹ ಬಳಸುವಂತಿಲ್ಲ ಎಂದು ಮಾಲ್​ನ ಸೆಕ್ಯುರಿಟಿ ಅವರು ಹೇಳಿದ್ದಾರೆ. ಸರಿಯೆಂದು ಮೂರು ಫ್ಲೋರ್ ಮೆಟ್ಟಿಲು ಹತ್ತಿ ಫುಡ್​ ಕೋರ್ಟ್ ಇದ್ದಲ್ಲಿಗೆ ಹೋದಾಗ ಅಲ್ಲಿ ಫುಡ್ ಡೆಲಿವರಿ ಅವರಿಗೆ ಊಟ ರೆಡಿಯಾಗುವವರೆಗೆ ಹತ್ತಿ ಬಂದ ಮೆಟ್ಟಿಲಿನ ಮೇಲೆ ಕುಳಿತು ಕಾಯಬೇಕು. ಅದೇಕೆಂದರೆ ಫುಡ್ ಡೆಲಿವರಿ ಏಜೆಂಟ್​ಗಳು ಮಾಲ್​ಗೆ ಬಂದಿರುವ ಜನರ ಕಣ್ಣಿಗೆ ಬೀಳಬಾರದು ಎಂದು.

ಆದರೆ ಫುಡ್ ಡೆಲಿವರಿ ಏಜೆಂಟ್​ಗಳು ಆರ್ಡರ್​ಗೆ ಕಾಯುವ ಸ್ಥಳದಲ್ಲಿ ಯಾವುದೇ ಕುರ್ಚಿ ಇಲ್ಲ, ಮೆಟ್ಟಿಲಿನ ಮೇಲೆ, ಬಂದ್ ಆಗಿರುವ ಡೋರ್​ನ ಹಿಂದೆ ಜನರಿಗೆ ಕಾಣದಂತೆ ಕೂತು ಆರ್ಡರ್​ಗೆ ಕಾಯಬೇಕು. ದೀಪೇಂದ್ರ ಘೋಯಲ್ ಅಲ್ಲಿಗೆ ಹೋಗುವಷ್ಟರಲ್ಲಿ ಇನ್ನೂ ಕೆಲವು ಫುಡ್ ಡೆಲವರಿ ಏಜೆಂಟ್​ಗಳು ಅಲ್ಲಿ ನೆಲದ ಮೇಲೆ ಕುಳಿತುಕೊಂಡು ಆರ್ಡರ್​ಗೆ ಕಾಯುತ್ತಿದ್ದರು. ದೀಪೇಂದ್ರ ಘೋಯಲ್ ಸಹ ಅವರೊಟ್ಟಿಗೆ ಕುಳಿತುಕೊಂಡು ಕೆಲ ಸಮಯ ಕಳೆದಿದ್ದಾರೆ, ಜೊಮ್ಯಾಟೊ ಆಪ್​ ಅನ್ನು ಪರಿಣಾಮಕಾರಿಯಾಗಿ ಬಳಸುವ ಬಗೆಯನ್ನು ಅವರಿಗೆ ಕಲಿಸಿದ್ದಾರೆ.

ಆ ನಂತರ ಅವರ ಫುಡ್ ಆರ್ಡರ್ ರೆಡಿಯಾದ ಮೇಲೆ ಅವರೇ ಬಂದು ಏಜೆಂಟ್​ಗಳಿಗೆ ಕೊಟ್ಟು ಹೋಗುತ್ತಾರೆ. ಇದೊಂದು ರೀತಿ ಗುಟ್ಟಾಗಿ ನಡೆಯುವ ಕಾರ್ಯ. ಡೆಲಿವರಿ ಏಜೆಂಟ್​ ಗಳನ್ನು ಮಾಲ್​ ಗಳು ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವ ಬಗ್ಗೆ ದೀಪೇಂದ್ರ ಘೋಯಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೀಪೇಂದ್ರ ಘೋಯಲ್ ಅವರ ಮನವಿಗೆ ಪ್ರತಿಕ್ರಿಯೆ ನೀಡಿರುವ ಗುರುಗ್ರಾಮದ ಆಂಬಿಯೆನ್ಸ್ ಮಾಲ್​ನವರು, ಡೆಲಿವರಿ ಏಜೆಂಟ್​ಗಳಿಗೆ ಪರಿಣಾಮಕಾರಿ, ಸಹಾಯಕ ವ್ಯವಸ್ಥೆಯನ್ನು ನಿರ್ಮಿಸುವುದಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here