zomato
ಜೊಮ್ಯಾಟೊ ಭಾರತದ ಅತಿ ದೊಡ್ಡ ಫುಡ್ ಡೆಲಿವರಿ ಸಂಸ್ಥೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ ಜೊಮ್ಯಾಟೊ ತನ್ನ ಸೇವೆಯನ್ನು ವಿಸ್ತರಿಸಿದೆ. ಈ ಸಂಸ್ಥೆಯ ಮಾಲೀಕ ದೀಪೇಂದ್ರ ಘೋಯಲ್. ಕಂಪೆನಿಯು ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಜೊತೆಗೆ ತನ್ನ ಸಂಸ್ಥೆಯ ಡೆಲಿವರಿ ಪಾರ್ಟನರ್ಗಳಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದಾರೆ. ಹಾಗಾಗಿ ವೀಕೆಂಡ್ಗಳಲ್ಲಿ ತಾವೇ ಫುಡ್ ಡೆಲಿವರಿ ಮಾಡಲು ಹೋಗುತ್ತಾರೆ. ಆ ಮೂಲಕ ಗ್ರಾಹಕರು, ಹೋಟೆಲ್ನವರು ಹಾಗೂ ಡೆಲಿವರಿ ಪಾರ್ಟನರ್ಗಳ ಜೊತೆಗೆ ನೇರವಾಗಿ ಮಾತನಾಡಿ ಅವರ ಕಷ್ಟಸುಖ ಕೇಳುತ್ತಾರೆ. ತಮ್ಮ ಸೇವೆಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುತ್ತಾರೆ.
ನಿನ್ನೆಯಷ್ಟ ದೀಪೇಂದ್ರ ಘೋಯಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದರು, ಈ ವಾರಾಂತ್ಯದಲ್ಲಿ ಅವರು ಡೆಲಿವರಿ ಏಜೆಂಟ್ ಆಗಿ ಫುಡ್ ಡೆಲಿವರಿ ಮಾಡಿದ್ದು ಅದರ ವಿಡಿಯೋ ಹಂಚಿಕೆ ಮಾಡಿಕೊಂಡಿದ್ದರು. ಕೆಲವು ಮೌಲ್ಯಯುತವಾದ ಪಾಠಗಳನ್ನು ಈ ಅವಧಿಯಲ್ಲಿ ಕಲಿತಿದ್ದಾಗಿ ಸಹ ಅವರು ಹೇಳಿಕೊಂಡಿದ್ದರು. ದೀಪೇಂದ್ರ, ಡೆಲಿವರಿ ಮಾಡಲು ಹೋದಾಗ ಕೆಲವು ಸಮಸ್ಯೆಗಳನ್ನು ಎದುರಿಸಿದ್ದು ಅದರ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
ದೀಪೇಂದ್ರ ಘೋಯಲ್, ಡೆಲಿವರಿ ಏಜೆಂಟ್ ಆಗಿ ಗುರುಗ್ರಾಮದಲ್ಲಿ ದೀಪೇಂದ್ರ ಘೋಯಲ್ ಕೆಲಸ ಮಾಡಿದ್ದಾರೆ. ಬೈಕ್ನಲ್ಲಿಯೇ ಡೆಲಿವರಿ ನೀಡಿದ್ದಾರೆ ದೀಪೇಂದ್ರ, ಮೊದಲ ಆರ್ಡರ್ ಡೆಲಿವರಿ ಮಾಡಿದ ಬಳಿಕ ಎರಡನೇ ಆರ್ಡರ್ ಬಂದಿದೆ. ಗುರುಗ್ರಾಮದ ಆಂಬಿಯನ್ಸ್ ಮಾಲ್ನ ಹಲ್ದಿರಾಮ್ಸ್ನಿಂದ ಆರ್ಡರ್ ಪಡೆದು ಅದನ್ನು ಡೆಲಿವರಿ ಮಾಡಬೇಕಿತ್ತಂತೆ.
Swiggy: ಸಸ್ಯಹಾರಿಗಳಾಗಿಬಿಟ್ಟರೆ ಬೆಂಗಳೂರಿಗರು, ಜೊಮ್ಯಾಟೊ ಹೇಳುತ್ತಿರುವುದೇನು?
ಜೊಮ್ಯಾಟೊ ಟಿ ಶರ್ಟ್ ಮತ್ತು ಜೊಮ್ಯಾಟೊ ಬ್ಯಾಗ್ ನೇತು ಹಾಕಿಕೊಂಡು ಮಾಲ್ಗೆ ಹೋದ ಕೂಡಲೇ ಮುಖ್ಯ ಬಾಗಿಲಿನಿಂದ ಡೆಲಿವರಿ ಏಜೆಂಟ್ಗಳು ಬರುವಂತಿಲ್ಲ ಬೇರೊಂದು ಬಾಗಿಲಿನಿಂದ ಒಳಗೆ ಹೋಗಲು ಹೇಳಿದ್ದಾರೆ. ಆ ನಂತರ ಮತ್ತೊಮ್ಮೆ ದೀಪೇಂದ್ರ ಘೋಯಲ್ ಹೋಗಿ ಕೇಳಿದ್ದಕ್ಕೆ ಡೆಲಿವರಿ ಏಜೆಂಟ್ಗಳು ಲಿಫ್ಟ್ಗಳನ್ನು ಸಹ ಬಳಸುವಂತಿಲ್ಲ ಎಂದು ಮಾಲ್ನ ಸೆಕ್ಯುರಿಟಿ ಅವರು ಹೇಳಿದ್ದಾರೆ. ಸರಿಯೆಂದು ಮೂರು ಫ್ಲೋರ್ ಮೆಟ್ಟಿಲು ಹತ್ತಿ ಫುಡ್ ಕೋರ್ಟ್ ಇದ್ದಲ್ಲಿಗೆ ಹೋದಾಗ ಅಲ್ಲಿ ಫುಡ್ ಡೆಲಿವರಿ ಅವರಿಗೆ ಊಟ ರೆಡಿಯಾಗುವವರೆಗೆ ಹತ್ತಿ ಬಂದ ಮೆಟ್ಟಿಲಿನ ಮೇಲೆ ಕುಳಿತು ಕಾಯಬೇಕು. ಅದೇಕೆಂದರೆ ಫುಡ್ ಡೆಲಿವರಿ ಏಜೆಂಟ್ಗಳು ಮಾಲ್ಗೆ ಬಂದಿರುವ ಜನರ ಕಣ್ಣಿಗೆ ಬೀಳಬಾರದು ಎಂದು.
ಆದರೆ ಫುಡ್ ಡೆಲಿವರಿ ಏಜೆಂಟ್ಗಳು ಆರ್ಡರ್ಗೆ ಕಾಯುವ ಸ್ಥಳದಲ್ಲಿ ಯಾವುದೇ ಕುರ್ಚಿ ಇಲ್ಲ, ಮೆಟ್ಟಿಲಿನ ಮೇಲೆ, ಬಂದ್ ಆಗಿರುವ ಡೋರ್ನ ಹಿಂದೆ ಜನರಿಗೆ ಕಾಣದಂತೆ ಕೂತು ಆರ್ಡರ್ಗೆ ಕಾಯಬೇಕು. ದೀಪೇಂದ್ರ ಘೋಯಲ್ ಅಲ್ಲಿಗೆ ಹೋಗುವಷ್ಟರಲ್ಲಿ ಇನ್ನೂ ಕೆಲವು ಫುಡ್ ಡೆಲವರಿ ಏಜೆಂಟ್ಗಳು ಅಲ್ಲಿ ನೆಲದ ಮೇಲೆ ಕುಳಿತುಕೊಂಡು ಆರ್ಡರ್ಗೆ ಕಾಯುತ್ತಿದ್ದರು. ದೀಪೇಂದ್ರ ಘೋಯಲ್ ಸಹ ಅವರೊಟ್ಟಿಗೆ ಕುಳಿತುಕೊಂಡು ಕೆಲ ಸಮಯ ಕಳೆದಿದ್ದಾರೆ, ಜೊಮ್ಯಾಟೊ ಆಪ್ ಅನ್ನು ಪರಿಣಾಮಕಾರಿಯಾಗಿ ಬಳಸುವ ಬಗೆಯನ್ನು ಅವರಿಗೆ ಕಲಿಸಿದ್ದಾರೆ.
ಆ ನಂತರ ಅವರ ಫುಡ್ ಆರ್ಡರ್ ರೆಡಿಯಾದ ಮೇಲೆ ಅವರೇ ಬಂದು ಏಜೆಂಟ್ಗಳಿಗೆ ಕೊಟ್ಟು ಹೋಗುತ್ತಾರೆ. ಇದೊಂದು ರೀತಿ ಗುಟ್ಟಾಗಿ ನಡೆಯುವ ಕಾರ್ಯ. ಡೆಲಿವರಿ ಏಜೆಂಟ್ ಗಳನ್ನು ಮಾಲ್ ಗಳು ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವ ಬಗ್ಗೆ ದೀಪೇಂದ್ರ ಘೋಯಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೀಪೇಂದ್ರ ಘೋಯಲ್ ಅವರ ಮನವಿಗೆ ಪ್ರತಿಕ್ರಿಯೆ ನೀಡಿರುವ ಗುರುಗ್ರಾಮದ ಆಂಬಿಯೆನ್ಸ್ ಮಾಲ್ನವರು, ಡೆಲಿವರಿ ಏಜೆಂಟ್ಗಳಿಗೆ ಪರಿಣಾಮಕಾರಿ, ಸಹಾಯಕ ವ್ಯವಸ್ಥೆಯನ್ನು ನಿರ್ಮಿಸುವುದಾಗಿ ಹೇಳಿದ್ದಾರೆ.