Zomato
ಭಾರತದ ಅತಿ ದೊಡ್ಡ ಫೂಡ್ ಡೆಲಿವರಿ ಆಪ್ ಜೊಮ್ಯಾಟೊ. ಈ ಸಂಸ್ಥೆ ತನ್ನ ವೇಗದ, ಗುಣಮಟ್ಟದ ಸೇವೆಯಿಂದಾಗಿ ತನ್ನ ಪ್ರತಿಸ್ಪರ್ಧಿ ಸ್ವಿಗ್ಗಿಗಿಂತಲೂ ಮುಂದೆ ಇದೆ. ಜೊಮ್ಯಾಟೊ, ತನ್ನ ಸೋಷಿಯಲ್ ಮೀಡಿಯಾ ಪ್ರೆಸೆನ್ಸ್’ನಿಂದಾಗಿಯೂ ಜನಪ್ರಿಯತೆ ಪಡೆದುಕೊಂಡಿದೆ. ನಿಯಮಿತವಾಗಿ ತನ್ನ ಗ್ರಾಹಕರು, ಡೆಲಿವರಿ ಏಜೆಂಟ್’ಗಳು ಹಾಗೂ ಒಟ್ಟು ಸಮಾಜಕ್ಕಾಗಿ ನಾನಾ ಬಗೆಯ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತದೆ. ಇದೀಗ ಇಂಥಹುದೇ ಪ್ರಯತ್ನ ಮಾಡುವಾಗ ಬೆಂಗಳೂರಿನ ವ್ಯಕ್ತಿಯೊಬ್ಬ ನೀಡಿದ ಸಲಹೆ ಜಿಮ್ಯಾಟೊ ಮಾಲೀಕರಿಗೆ ಬಹಳ ಇಷ್ಟವಾಗಿದ್ದು, ಸ್ವತಃ ಮಾಲೀಕರೇ ಆ ವ್ಯಕ್ತಿಗೆ ಕೆಲಸಕ್ಕೆ ಆಹ್ವಾನ ನೀಡಿದ್ದಾರೆ.
ಇತ್ತೀಚೆಗೆ ಜೊಮ್ಯಾಟೊನಲ್ಲಿ ಆರ್ಡರ್ ಕ್ಯಾನ್ಸಲ್ ಹೆಚ್ಚಾಗಿತ್ತಂತೆ, ಇದರಿಂದ ಸಾಕಷ್ಟು ಊಟ ವೇಸ್ಟ್ ಆಗುತ್ತಿದ್ದ ಜೊತೆಗೆ, ಜೊಮ್ಯಾಟೊಗೆ ಹಾಗೂ ಡೆಲಿವರಿ ಏಜೆಂಟ್’ಗಳಿಗೂ ನಷ್ಟ ಆಗುತ್ತಿತ್ತು. ಇದನ್ನು ಗಮನಿಸಿದ ಜೊಮ್ಯಾಟೊ ಮಾಲೀಕ ದೀಪೆಂಧರ್ ಘೋಯಲ್ ಇದನ್ನು ತಡೆಯಲು ‘ಫುಡ್ ರೆಸ್ಕ್ಯೂ’ ಕ್ಯಾಂಪೇನ್ ಪ್ರಾರಂಭ ಮಾಡಿದ್ದರು. ಇದನ್ನು ನೋಡಿದ ಬೆಂಗಳೂರಿನ ಭಾನು ಎಂಬುವರು ಜೊಮ್ಯಾಟೊಗೆ ನಾಲ್ಕು ಸಲಹೆ ನೀಡಿದ್ದರು. ಸಲಹೆ ಓದಿದ ದೀಪೇಂಧರ್ ಘೋಯಲ್’ಗೆ ಭಾನು ಅವರ ಯೋಚನೆ ಬಹಳ ಹಿಡಿಸಿ, ಸಾಮಾಜಿಕ ಜಾಲತಾಣದ ಮೂಲಕವೇ ಅವರಿಗೆ ಕೆಲಸದ ಆಫರ್ ನೀಡಿದ್ದಾರೆ.
ಭಾನು ನೀಡಿದ್ದ ಸಲಹೆಗಳೆಂದರೆ, ಕ್ಯಾಶ್ ಆನ್ ಡೆಲಿವರಿ ಆಪ್ಷನ್’ಗೆ ಕ್ಯಾನ್ಸಲ್ ಆರ್ಡರ್ ಆಪ್ಷನ್ ಇರಲೇ ಬಾರದು, ಮೊದಲು ಹಣ ಕಟ್ಟಿದವರಿಗೆ ಮಾತ್ರ ಕ್ಯಾನ್ಸಲ್ ಆರ್ಡರ್ ಆಪ್ಷನ್ ಇರಬೇಕು. ಒಂದೊಮ್ಮೆ ಆರ್ಡರ್ ಮಾಡಿದ ಆಹಾರ 500 ಮೀಟರ್ ವ್ಯಾಪ್ತಿಯ ಒಳಗೆ ಇದ್ದರೆ ಆರ್ಡರ್ ಕ್ಯಾನ್ಸಲ್ ಮಾಡಬಾರದು, ಗ್ರಾಹಕ ಅದನ್ನು ಸ್ವೀಕರಿಸಲೇ ಬೇಕು. ಒಬ್ಬ ಗ್ರಾಹಕ ತಿಂಗಳಿಗೆ ಎರಡು ಬಾರಿ ಮಾತ್ರ ಆರ್ಡರ್ ಕ್ಯಾನ್ಸಲ್ ಮಾಡಬಹುದು ಎಂಬ ನಿಯಮ ಜಾರಿ ಆಗಬೇಕು. ಈ ಆರ್ಡರ್ ಕ್ಯಾನ್ಸಲ್ ನಲ್ಲಿ ಡೆಲಿವರಿ ಏಜೆಂಟ್ ಕೈವಾಡವೂ ಇರಬಹುದಾದ್ದರಿಂದ ಅವರಿಗೂ ನಿಯಮಗಳನ್ನು ರೂಪಿಸಬೇಕು’ ಎಂದಿದ್ದರು ಭಾನು.
Starlink: ಭಾರತಕ್ಕೆ ಬರಲಿದೆ ಅತ್ಯುತ್ತಮ ನೆಟ್ವರ್ಕ್ ಸಂಸ್ಥೆ ಜಿಯೋ, ಏರ್ಟೆಲ್ಗೆ ನಡುಕ
ಭಾನಜ ಅವರ ಟ್ವೀಟ್’ಗೆ ಪ್ರತಿಕ್ರಿಯೆ ನೀಡಿರುವ ದೀಪೇಂದ್ರ ಘೋಯಲ್, ‘ನೀವು ಕೊಟ್ಟಿರುವ ಎಲ್ಲ ಸಲಹೆಗಳು, ಮತ್ತೂ ಇನ್ನೂ ಕೆಲವು ಸಲಹೆಗಳನ್ನು ಈಗಾಗಲೇ ನಾವು ಜಾರಿ ಮಾಡುತ್ತಿದ್ದೇವೆ. ನಿಮ್ಮ ಯೋಚನೆ ಚೆನ್ನಾಗಿದೆ. ನಿಮ್ಮ ಬಗ್ಗೆ ತಿಳಿದುಕೊಳ್ಳಬೇಕಿದೆ. ನೀವು ಯಾರು? ಏನು ಮಾಡುತ್ತೀರಿ? ನಾವು ಒಟ್ಟಿಗೆ ಕೆಲಸ ಮಾಡಬಹುದೇ? ಹೌದಾದರೆ ನನಗೆ ಖಾಸಗಿಯಾಗಿ ಮೆಸೇಜ್ ಮಾಡಿ’ ಎಂದಿದ್ದಾರೆ ದೀಪೇಂದ್ರ ಘೋಯಲ್.