Zomato, Swiggy: ಕುಡುಕರಿಗೆ ಶುಭ ಸುದ್ದಿ ‘ಎಣ್ಣೆ’ ಡೆಲಿವರಿ ಮಾಡಲಿದೆ ಜೊಮ್ಯಾಟೊ, ಎಲ್ಲೆಲ್ಲಿ ಈ ಸೌಲಭ್ಯ?

0
121
Zomato, Swiggy
Swiggy and Zomato

Zomato, Swiggy

ಜೊಮ್ಯಾಟೊ ಭಾರತದ ಅತಿದೊಡ್ಡ ಫುಡ್ ಡೆಲಿವರಿ ಸಂಸ್ಥೆ. ಬೆಂಗಳೂರು ಮೂಲದ ಈ ಸಂಸ್ಥೆ ಭಾರತದ ಹಲವು ರಾಜ್ಯಗಳಲ್ಲಿ ಸೇವೆ ಒದಗಿಸುತ್ತಿದೆ. ಜೊಮ್ಯಾಟೊ ಈ ವರೆಗೂ ಆಹಾರ ಡೆಲಿವರಿಯನ್ನಷ್ಟೆ ಮಾಡುತ್ತಿತ್ತು, ಆದರೆ ಈಗ ಮದ್ಯವನ್ನು ಸಹ ಗ್ರಾಹಕರಿಗೆ ಅವರ ಮನೆಗೆ ಡೆಲಿವರಿ ಮಾಡುವ ಯೋಜನೆ ಹಾಕಿಕೊಂಡಿದೆ. ಆದರೆ ಈ ಸೌಲಭ್ಯ ದೇಶದ ಎಲ್ಲ ರಾಜ್ಯಗಳಲ್ಲಿಯೂ ಇಲ್ಲ. ಬದಲಿಗೆ ಕೆಲವು ಕಡೆ ಮಾತ್ರವೇ ಸಿಗಲಿದೆ.

ಜೊಮ್ಯಾಟೊ ಮಾತ್ರವೇ ಅಲ್ಲ, ಆನ್ ಲೈನ್ ಪ್ರಾಡೆಕ್ಟ್ ಡೆಲಿವರಿ ಸಂಸ್ಥೆಗಳಾದ ಸ್ವಿಗ್ಗಿ, ಬಿಗ್ ಬಾಸ್ಕೆಟ್ ಇತರೆ ಕೆಲವು ಸಂಸ್ಥೆಗಳು ಸಹ ಆನ್ ಲೈನ್ ಮದ್ಯ ಡೆಲಿವರಿಗೆ ಮುಂದಾಗಿವೆ. ಹಲವು ರಾಜ್ಯಗಳ ಬಗ್ಗೆ ಈಗಾಗಲೇ ಈ ಬಗ್ಗೆ ಮಾತುಕತೆ ನಡೆದಿದ್ದು, ಕೆಲವು ರಾಜ್ಯಗಳು ಮದ್ಯದ ಆನ್ ಲೈನ್ ಡೆಲಿವರಿ ಬಗ್ಗೆ ಆಸಕ್ತಿ ತೋರಿಸಿವೆ.

ನವ ದೆಹಲಿ, ಕೇರಳ, ಗೋವಾ, ಪಂಜಾಬ್ ರಾಜ್ಯಗಳು ಆನ್ ಲೈನ್ ಮದ್ಯ ಡೆಲಿವರಿಗೆ ಆಸಕ್ತಿ ತೋರಿಸಿದ್ದು ಶೀಘ್ರವೇ ಈ ರಾಜ್ಯಗಳಲ್ಲಿ ಯೋಜನೆ ಜಾರಿಗೆ ಬರಲಿದೆ‌. ಆದರೆ ಆನ್ ಲೈನ್ ಮದ್ಯ ಆರ್ಡರ್ ಮಾಡಲು ರಾಜ್ಯ ಸರ್ಕಾರಗಳು ಹಾಗೂ ಡೆಲಿವರಿ ಸಂಸ್ಥೆಗಳು ಕೆಲವು ಕಠಿಣ ನಿಯಮಗಳನ್ನು ಗ್ರಾಹಕರಿಗೆ ವಿಧಿಸಲಿವೆ.

Baba Vanga: ಬಾಬಾ ವಂಗಾ ಭವಿಷ್ಯ: 2024 ರಲ್ಲಿ ಭೂಮಿಗೆ ಕಾದಿದೆ ಗಂಡಾಂತರ

ಆಧಾರ್ ಕಾರ್ಡ್ ಲಿಂಕ್ ಸೇರಿದಂತೆ ಲೈವ್ ವೀಡಿಯೋ ಮೂಲಕ ವಯಸ್ಸು ಖಾತ್ರಿ ಪಡಿಸಬೇಕಾದ ಅಗತ್ಯತೆ ಗ್ರಾಹಕರಿಗೆ ಇರುತ್ತದೆ. ಆರ್ಡರ್ ಮಾಡುವ ಪ್ರಮಾಣದ ಮೇಲೂ ಸಹ ನಿರ್ಭಂಧ ವಿಧಿಸಲಾಗುತ್ತದೆ. ಒಬ್ಬ ವ್ಯಕ್ತಿ ಒಂದು ತಿಂಗಳಲ್ಲಿ ಇಂತಿಷ್ಟೆ ಲೀಟರ್ ಮದ್ಯ ಆರ್ಡರ್ ಮಾಡಬಹುದು ಎಂಬ ನಿಯಮವೂ ಇರಲಿದೆ. ಅಲ್ಲದೆ ನಿರ್ದಿಷ್ಟ ಮಾದರಿಯ ಮದ್ಯವನ್ನಷ್ಟೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಬಹುದೆಂಬ ನಿಯಮವೂ ಸಹ ಇರಲಿದೆ.

ಸ್ವಿಗ್ಗಿಯ ಉಪ ಸಿಇಓ ದಿನಕರ್ ವಶಿಷ್ಠ ಈ ಬಗ್ಗೆ ಮಾತನಾಡಿದ್ದು, ‘ಆನ್ ಲೈನ್ ಮದ್ಯ ಡೆಲಿವರಿಯಿಂದ ರಾಜ್ಯಗಳಿಗೆ ಸಾಕಷ್ಟು ಲಾಭ ಆಗಲಿದೆ. ಮದ್ಯ ಡೆಲಿವರಿ ಬಗ್ಗೆ ಆನ್ ಲೈನ್ ಡೆಲಿವರಿ ಸಂಸ್ಥೆಗಳು ಕಠಿಣ ನಿಯಮ ಪಾಲಿಸಲಿವೆ. ವಯಸ್ಸಿನ ಖಾತ್ರಿ, ಡ್ರೈ ಡೇ, ಮದ್ಯ ನಿಷೇಧ ಏರಿಯಾಗಳು ಇನ್ನಿತರೆಗಳನ್ನು ಗಮನದಲ್ಲಿಟ್ಟುಕೊಂಡೆ ಮದ್ಯ ಡೆಲಿವರಿ ಮಾಡಲಿದ್ದೇವೆ’ ಎಂದಿದ್ದಾರೆ.

ಕೋವಿಡ್ ಸಮಯದಲ್ಲಿ ಮಹಾರಾಷ್ಟ್ರ, ಜಾರ್ಖಂಡ್, ಚತ್ತೀಸ್ ಘಡ, ಅಸ್ಸಾಂ ರಾಜ್ಯಗಳು ಮದ್ಯದ ಆನ್ ಲೈನ್ ಡೆಲಿವರಿಗೆ ತಾತ್ಕಾಲಿಕ ಒಪ್ಪಿಗೆ ನೀಡಿದ್ದವು. ಈಗ ಆ ರಾಜ್ಯಗಳು ಸಹ ಶಾಶ್ವತ ಆನ್ ಲೈನ್ ಮದ್ಯ ಡೆಲಿವರಿ ಬಗ್ಗೆ ಚಿಂತನೆ ನಡೆಸಿವೆ. ಈ ರಾಜ್ಯಗಳಲ್ಲಿ ಈ ಯೋಜನೆ ಸಫಲವಾದಲ್ಲಿ ಇತರೆ ರಾಜ್ಯಗಳೂ ಸಹ ಆನ್ ಲೈನ್ ಮದ್ಯ ಡೆಲಿವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here